ಹಚ್ಚೇವು ಕನ್ನಡದ ದೀಪ
ಕರುನಾಡದೀಪ
ಸಿರಿನುಡಿ ಯದೀಪ
ಒಲವೆತ್ತಿ ತೋರುವಾ ದೀಪ | ಹಚ್ಚೇವು
ಇಂದಿನ ಕಥೆ
ಚೈತ್ರ ಮಾಸ

ಮೃಗರಾಜನ ಕಾಯಿಲೆ

ಮೃಗರಾಜ ಸಿಂಹಕ್ಕೆ ತುಂಬಾ ಕಾಯಿಲೆಯಾಗಿದೆಯೆಂದು ಕಾಡಿನಲ್ಲೆಲ್ಲಾ ಸುದ್ದಿ ಹಬ್ಬಿತು. ಸಾಯುತ್ತಿರುವ ಆ ರಾಜನಿಗೆ ಗೌರವಸಲ್ಲಿಸಲು ಇಲಿ, ಮೊಲ, ನವಿಲು, ಕುರಿ, ಬಾತುಕೋಳಿ, ಮೇಕೆ ಮುಂತಾದುವೆಲ್ಲಾ ಸಾಲಾಗಿ ಗವಿಯೊಳಗೆ ಹೋದುವು.

ಆ ಸಾಲಿನಲ್ಲಿ ಕಡೆಯದಾಗಿ ನಿಂತ ನರಿ ಒಳಹೋಗಲು ಸಂದೇಹಪಡುತ್ತಾ ನಿಂತಿತ್ತು. ಅದನ್ನು ಕಂಡು ಸಿಂಹ ಗವಿಯ ಬಾಗಿಲಿಗೆ ತೆವಳಿ ಸಣ್ಣ ಧ್ವನಿಯಲ್ಲಿ ಹೇಳಿತು: ``ಬಾರಯ್ಯಾ ನರಿ ಹತ್ತಿರ ಬಂದು ನನ್ನ ಕಿವೀಲಿ ಒಂದೆರಡು ಒಳ್ಳೇ ಮಾತು ಹೇಳು." ನರಿ, ``ಇವತ್ತು ಬೇಕಾದಷ್ಟು ಪ್ರಾಣಿಗಳು ಬಂದು ನಿನ್ನ ಹೊಟ್ಟೆ ತುಂಬೋಷ್ಟು ಒಳ್ಳೆ ಮಾತುಗಳನ್ನು ಹೇಳಿದುವಲ್ವೆ?"ಎಂದು ಕೇಳಿತು.

ಸಿಂಹ ತಲೆದೂಗುತ್ತಾ ``ಹೌದು. ಆದ್ರೆ ನೀನು ಹೇಳದಿದ್ರೆ ನಂಗೆ ಸಮಾಧಾನವಿಲ್ಲ. ಯಾರಿಗ್ಗೊತ್ತು?ನಿನ್ನ ಮಾತ್ನಿಂದ ನನ್ನ ಕಾಯಿಲೆ ಗುಣವಾದ್ರೂ ಆಯಿತೇ"ಎಂದಿತು.

ಜಾಣನರಿ ನಕ್ಕು ದೂರದಿಂದಲೇ ಹೇಳಿತು:

``ಧನ್ಯವಾದ ಸಿಂಹರಾಜಾ, ಪ್ರಾಣಿಗಳ ಹೆಜ್ಜೆ ಗುರುತುಗಳೆಲ್ಲಾ ನಿನ್ನ ಗುಹೆಯತ್ತ ಹೋಗಿವೆ. ಒಂದಾದ್ರೂ ಹೊರಗ್ಬಂದ ಗುರುತಿಲ್ಲ.ಆದ್ದರಿಂದ ನಮಸ್ಕಾರ ನಿಂಗೆ, ನಾನು ಬರ್ತೀನಿ"ಎನ್ನುತ್ತಾ ನರಿ ಕಾಡಿನೊಳಗೆ ಓಡಿ ಹೋಯಿತು.