ಅಶ್ವಮೇಧಿಕಪರ್ವ
ಎಷ್ಟೇ ಪ್ರಯತ್ನಿಸಿದರೂ ಯುಧಿಷ್ಠಿರನಿಗೆ ಕಳೆದುಹೋದುದನ್ನು
ಮರೆಯಲಾಗಲಿಲ್ಲ. ಯುದ್ಧಕ್ಕಿಂತ ಮೊದಲು. ಧೃತರಾಷ್ಟ್ರನು ಸಂಜಯನ
ಮೂಲಕ ಹೇಳಿಕಳಿಸಿದ ಸಂದರ್ಭದಲ್ಲಿ, ಯುಧಿಷ್ಠಿರನು ತನ್ನ ಸ್ವಭಾವ
ಮೃದುವೆಂದೂ, ದಾಯಾದಿಗಳನ್ನು ಕೊಂದರೆ ತಾನು ಜೀವನ ಪರ್ಯಂತ
ದುಃಖಪಡಬೇಕಾಗಿರುವುದೆಂದೂ ಉತ್ತರ ಹೇಳಿಕಳಿಸಿದ್ದನು. ಅದು
ಸತ್ಯವಾಗಿತ್ತು. ರಾಜನ ಸ್ಥಿತಿ ಎಲ್ಲರಿಗೂ ಆತಂಕಕ್ಕೆ
ಕಾರವಾಯಿತು. ಧೃತರಾಷ್ಟ್ರನು ತನ್ನ ನೋವನ್ನೂ ಮರೆತು ಕೃಷ್ಣನೊಡಗೂಡಿ
ಯುಧಿಷ್ಠಿರನಿಗೆ ಸಮಾಧಾನ ಹೇಳಲು ಪ್ರಯತ್ನಿಸಿದನು. ಕೊನೆಗೂ ಸಮಾಧಾನ
ತಂದುಕೊಂಡು ರಾಜಕಾರ್ಯಗಳ ಕಡೆ ಗಮನ ಕೊಡಲಾರಂಭಿಸಿ, ಆದರ್ಶ
ರಾಜನೆನೆಸಿಕೊಂಡಾಗ ಎಲ್ಲರೂ ಸಂತೋಷಿಸಿದರು. ತನ್ನ ದಯಾಪೂರ್ಣ
ಮೃದುದಯದಿಂದ ಯುಧಿಷ್ಠಿರನು ಎಲ್ಲರ ಮನಸ್ಸನ್ನೂ ಗೆದ್ದುಕೊಡಿದ್ದನು.
ಹಳೆಯ ದಿನಗಳನ್ನು ಸ್ಮರಿಸಿಕೊಳ್ಳುವುದಕ್ಕೆಂದು ಕೃಷಾಣರ್ಜುನರು
ಇಂದ್ರಪ್ರಸ್ಥಕ್ಕೆ ಹೋದರು. ಮಯನಿರ್ಮಿತವಾದ ಆ ಮಹಾ ಸಭೆ, ಆ
ಉದ್ಯಾನವನಗಳು ಅವರಿಗೆ ಮುದವನ್ನು ನೀಡಿದವು. ತಾವು
ಇಂದ್ರಪ್ರಸ್ಥವನ್ನು ಬಿಟ್ಟ ಮೇಲೆ ಈ ಹದಿನೈದು ವರ್ಷಗಳಲ್ಲಿ ನಡೆದ
ಘಟನೆಗಳನ್ನೆಲ್ಲ ಒಂದೊದಾಗಿ ಮೆಲುಕು ಹಾಕಿದರು. ಅಗ್ನಿಗೆ ಖಾಂಡವವನವನ್ನು
ಉಣಬಡಿಸಿ ತೃಪ್ತಿಪಡಿಸಿದ್ದು ಹದಿನೈದು ವರ್ಷಗಳ ಹಿಂದಲ್ಲವೆ?
ತಮ್ಮಿಂದಾಗಿ ಜೀವ ಉಳಿಸಿಕೊಂಡ ಮಯ ಕೃತಜ್ಞತೆಯಿಂದ ಈ ಸಭೆಯನ್ನು
ಕಟ್ಟಿಕೊಟ್ಟಿದ್ದ. ಅನಂತರ ಬಂದ ನಾರದಮಹರ್ಷಿ ರಾಜಸೂಯ ಯಾಗವನ್ನು
ಮಾಡಿರೆಂಬ ಸಲಹೆಯನ್ನು ಕೊಟ್ಟಿದ್ದು.
ಈ ಘೋರ ದುರಂತ ನಡೆಯುವುದಕ್ಕೆ ಕಾರಣವಾದ ಮುಖ್ಯ ಘಟನೆಗಳನ್ನು ಅವರು
ಒಂದೊಂದಾಗಿ ಸ್ಮರಿಸಿಕೊಂಡರು. ದ್ರೌಪದಿಯು ತಮ್ಮ ಜೀವನದಲ್ಲಿ
ಕಾಲಿರಿಸಿದ್ದು; ಅನಂತರ ಕೃಷಣನು ಪಾಂಡವರನ್ನು ಭೇಟಿಯಾದದ್ದು; ನಾರದನು
ಂದು ಇಂದ್ರಸಭೆಯಲ್ಲಿ ತಾನು ಪಾಂಡುವನ್ನು ಕಾಣಲಿಲ್ಲವೆಂದದ್ದು; ದುಃಖಿತನಾದ
ಯುಧಿಷ್ಠಿರನಿಗೆ ಇದಕ್ಕೆ ಪರಿಹಾರವಾಗಿ ರಾಜಸೂಯಯಾಗವನ್ನು ಮಾಡುವಂತೆ
ಸಲಹೆ ಕೊಟ್ಟಿದ್ದು; ಇದೇ ಈ ಎಲ್ಲ ನೋವುಗಳಿಗೂ ಮೂಲಕಾರಣ.
ಶಿಶುಪಾಲನನ್ನು ಕೊಂದದ್ದು ಅದರ ಮುಂದಿನ ಘಟನೆ. ಮುಂದಿನದೆಲ್ಲ
ನಡೆದದ್ದು ಬೇಗ ಬೇಗ: ದುರ್ಯೋಧನನು ಶಕುನಿಯನ್ನು ಮುಂದಿಟ್ಟುಕೊಂಡು
ದ್ಯೂತವಾಡಿದ್ದು; ದ್ರೌಪದಿಯನ್ನು ಸಭೆಯಲ್ಲಿ ಅಪಮಾನಿಸಿದ್ದು; ಇದೇ
ಘೋರದುರಂತದ ಆರಂಭವೆನ್ನಬಹುದು. ಪ್ರತಿಜ್ಞೆಗಳನ್ನೆಲ್ಲ ಮಾಡಿದ್ದು
ಆವಾಗಲೇ; ಉಳಿದದ್ದು ಅವುಗಳನ್ನು ಪೂರೈಸಿಕೊಂಡದ್ದಷ್ಟೇ. ದ್ವಾರಕೆಯಲ್ಲಿ
ಅರ್ಜುನ ದುರ್ಯೋಧನರು ಕೃಷ್ಣನ ಸಹಾಯ ಕೇಳುವುದಕ್ಕೆ ಹೋದ ಘಟನೆ, ಆಗ
ಅರ್ಜುನನು ಅಕ್ಷೌಹಿಣಿ ಸೈನ್ಯವನ್ನು ಬಿಟ್ಟು ಕೃಷ್ಣನನ್ನೇ ಆರಿಸಿಕೊಂಡದ್ದು
ಅವರೆಲ್ಲರ ಭವಿಷ್ಯವನ್ನೂ ನಿರ್ಧರಿಸಿಬಿಟ್ಟಿತು. ಕೊನೆಯದೇ ಭೀಷ್ಮ ದ್ರೋಣ
ರಾಧೇಯ ಅಭಿಮನ್ಯು ಮುಂತಾದ ಮಹಾಮಹಿಮರನ್ನು ಬಲಿ ತೆಗೆದುಕೊಂಡ ಘೋರವಾದ
ಮಹಾಯುದ್ಧ. ಶಕುನಿಯ ಸಾವಿನೊಂದಿಗೆ ಈ ನಾಟಕದ ಮುಕ್ತಾಯ. ದುರ್ಯೋಧನನ
ಸಾವು ಅದರ ಭರತವಾಕ್ಯ. ಅನೇಕ ವರ್ಷಗಳಷ್ಟು ದೀರ್ಘಕಾಲ ನಡೆದ ನಾಟಕ!
ಈಗ ಕಾಲದಲ್ಲಿ ಸ್ವಲ್ಪದೂರ ಬಂದು ಹಿಂದಿರುಗಿ ನೋಡಿದಾಗ ಅಬ್ಬಾ, ಈ
ಮಹಾನಾಟಕದಲ್ಲಿ ನಾವೂ ನಟಿಸಿದೆವೇ ಎನ್ನಿಸುತ್ತಿದೆ!
ಕೃಷಣನು, “ಅರ್ಜುನ, ಮಹಾಯುದ್ಧ ಮುಗಿಯಿತು. ನಿನ್ನ ಶತ್ರುಗಳೆಲ್ಲರೂ
ಸತ್ತರು. ಯುಧಿಷ್ಠಿರನು ಕುರುರಾಜ್ಯದ ಸಾಮ್ರಾಟನಾದನು. ನಾನು
ಜವಾಬ್ದಾರಿಯಿಂದ ಹೊತ್ತುಕೊಂಡಿದ್ದ ಈ ಕೆಲಸವನ್ನು ಮುಗಿಸಿಕೊಟ್ಟಿದ್ದೇನೆ. ಈಗ
ನನ್ನ ತಂದೆತಾಯಿಗಳನ್ನು ನೋಡಲು ದ್ವಾರಕೆಗೆ ಹೋಗಬೇಕು ಎನ್ನಿಸುತ್ತಿದೆ.
ನಿನ್ನಣ್ಣನನ್ನು ಕೇಳುವ ಮೊದಲು ನನಗೆ ಅನುಜ್ಞೆ ಕೊಡಬೇಕು, ಅರ್ಜುನ,
ಅನಂತರ ನೀನೇ ಅವನಿಗೆ ಹೇಳು. ಅವನು ಒಪ್ಪಿದರೆ, ನಾನು ದ್ವಾರಕೆಗೆ
ಹೊರಡುತ್ತೇನೆ. ಇಲ್ಲವಾದರೆ ಇಲ್ಲಿಯೇ ಉಳಿಯುತ್ತೇನೆ. ನನ್ನ ಇಷ್ಟಕ್ಕಿಂತ
ಅವನ ಇಷ್ಟವೇ ನನಗೆ ಮುಖ್ಯ. ಅವನಿಗೆ ಸಹಾಯ ಮಾಡಲು ನೀವೆಲ್ಲ ಇದ್ದೀರಿ.
ವಿದುರನಿದ್ದಾನೆ. ಇನ್ನು ನನ್ನದೇನು ಕೆಲಸ? ನಾನು ಮನೆಗೆ ಹೊರಡುವೆ.
ನೀನಿನ್ನು ನನಗೆ ಅನುಜ್ಞೆಕೊಡು” ಎಂದನು.
ಕೃಷಣನ ಮಾತು ಕೇಳಿ ಅರ್ಜುನನಿಗೆ ಕಣ್ಣೀರು ಬಂದಿತು. ಇನ್ನು
ಕೃಷಣನೊಡನೆ ಒಡನಾಟ ಮುಗಿಯಿತು. ಪಾರ್ಥ, ಸಾರಥಿ ಇನ್ನು ಬೇರೆ ಬೇರೆ!
ಇನ್ನೂ ಒಂದು ಸಲ ಯುದ್ಧವಾಗುವುದಾದರೂ ಚಿಂತೆಯಿಲ್ಲ, ಹಿಂದಿನ ದಿನಗಳು
ಇನ್ನೊಮ್ಮೆ ಬರಬಾರದೆ ಎಂದು ಅವನ ದಯ ಹಂಬಲಿಸುತ್ತಿತ್ತು. ಇಬ್ಬರೂ
ರಣೋತ್ಸಾಹದಿಂದ ಶಂಖವನ್ನೂದಿಕೊಂಡು ಯುದ್ಧರಂಗಕ್ಕಿಳಿಯುತ್ತಿದ್ದ ಆ
ದಿನಗಳು! ಆ ಹದಿನೆಂಟು ದಿನಗಳು ಅವನ ಜೀವನದಲ್ಲಿಯೇ ಅತ್ಯಂತ
ಉತ್ಸಾಹದ ದಿನಗಳು. ಕ್ಷಣಮಾತ್ರವೂ ಬೇರೆಯಾಗದಂತೆ ಕೃಷಣನೊಡನೆ ಇದ್ದ
ದಿನಗಳು. ಈಗ ಕೃಷಣ, “ನನ್ನ ಉದ್ದೇಶ ಮುಗಿಯಿತು” ಎನ್ನುತ್ತಿದ್ದಾನೆ.
ತನ್ನ ರಧ ಉರಿದುಹೋದ ಆ ದಿನ! ಪ್ರಪಂಚದಲ್ಲಿ ಎಲ್ಲವನ್ನೂ ಒಂದು
ಉದ್ದೇಶದಿಂದ ಷ್ಟಿಸಲಾಗಿರುತ್ತದೆ ಎಂದಿದ್ದ ಷ್ಣ. ಆ ಉದ್ದೇಶ
ಮುಗಿದೊಡನೆ ಲೋಕಕ್ಕೆ ಅದರ ಆವಶ್ಯಕತೆ ಇಲ್ಲ. ಅದರೆ ಷ್ಣ ಹಾಗಲ್ಲ!
ಅವನು ನನಗೆ ಯಾವಾಗಲೂ ಬೇಕು. ಅವನಿಲ್ಲದೆ ತಾನಿರುವುದೆಂತು? ಅವನು ತನ್ನ
ಕೆಲಸವಾಯಿತು. ಹುಟ್ಟಿ ಬಂದ ಉದ್ದೇಶ ಮುಗಿಯಿತು, ಎಂದು ಹೇಳಬಹುದೆ?
ಅರ್ಜುನ ಕಣ್ಣೀರಿಡುತ್ತ, “ಕೃಷಣ, ಇನ್ನೊಮ್ಮೆ ಹಾಗೆ ಹೇಳಬೇಡ! ನಾನು
ಸಹಿಸಿಕೊಳ್ಳಲಾರೆ” ಎನ್ನಲು ಕೃಷಣನು ನಕ್ಕು, “ನಿನ್ನನ್ನು
ನೋಯಿಸಬೇಕೆಂದು ಹೇಳಿದ್ದಲ್ಲ, ಅರ್ಜುನ. ಯುದ್ಧವಾಯಿತು ಎಂದೆ ಅಷ್ಟೆ. ನಿನಗೆ
ನಾನು, ನನಗೆ ನೀನು ಬೇಕೆಂದು ನನಗೆ ಚೆನ್ನಾಗಿ ಗೊತ್ತು. ನಾನಾದರೂ ನಿನ್ನನ್ನು
ಬಿಟ್ಟು ಇರಬಲ್ಲೆನೆ? ನನ್ನ ಅರ್ಧ ಜೀವವೇ ಅರ್ಜುನ!” ಎಂದನು.
ಜಯದ್ರಥನು ಸತ್ತ ಹಿಂದಿನ ರಾತ್ರಿ ತಾನು ದಾರುಕನಿಗೆ, ಸಮಯ ಬಂದರೆ ನಾನು
ಯುದ್ಧಕ್ಕಿಳಿಯಲು ಹಿಂಜರಿಯುವುದಿಲ್ಲ ಎಂದು ಹೇಳಿದ್ದನ್ನು ಈಗ ಅರ್ಜುನನಿಗೆ
ತಿಳಿಸಿದ. ಅರ್ಜುನನಿಗೆ ದಯ ತುಂಬಿ ಬಂತು. ಇಬ್ಬರೂ ಸ್ವಲ್ಪ ಹೊತ್ತು
ಸುಮ್ಮನೆ ಕುಳಿತರು. ತಾವಿಬ್ಬರೂ ಎರಡು ದೇಹ, ಒಂದೇ ಪ್ರಾಣ; ಅದರ ಬಗ್ಗೆ
ಮಾತನಾಡುವುದೇಕೆ? ಎಷ್ಟೊಹೊತ್ತಿನ ನಂತರ, ಪುನಃ ಬೇಗ ಹಿಂದಿರುಗುವ
ನಿಬಂಧನೆಯ ಮೇಲೆ, ಕೃಷಣ ದ್ವಾರಕೆಗೆ ಹೋಗಬಹುದು ಎಂದು ಅರ್ಜುನ
ಒಪ್ಪಿದ. ಅನಂತರ ಅವರು ಹಸ್ತಿನಾಪುರಕ್ಕೆ ಹಿಂದಿರುಗಿದರು.
ಇಂದ್ರಪ್ರಸ್ಥದಲ್ಲಿ ಕಳೆದ ಈ ಕೆಲವು ದಿನಗಳು ತುಂಬ ಸಂತೋಷವನ್ನು
ಕೊಟ್ಟವು. ಹಳೆಯ ದಿನಗಳ ಸ್ಮರಣೆ ಅದೆಷ್ಟು ಆನಂದಮಯ!
ರಾತ್ರಿ ಸುವಾಗಿ ಕಳೆಯಿತು. ಬೆಳಗ್ಗೆ ಕೃಷಾಣರ್ಜುನರು
ಯುಧಿಷ್ಠಿರನಿದ್ದಲ್ಲಿಗೆ ಬಂದರು. ಅರ್ಜುನ ಮೆಲ್ಲಗೆ ಕೃಷಣನು ದ್ವಾರಕೆಗೆ
ಹಿಂದಿರುಗಬೇಕೆಂದಿರುವುದರ ಪ್ರಸ್ತಾಪ ತೆಗೆದ. ಅದನ್ನು ಕೇಳಿದೊಡನೆ
ಯುಧಿಷ್ಠಿರನಿಗೆ ಕಣ್ಣೀರು ಬಂತು. ಅವನು ಕಣ್ಣಿರೊರೆಸಿಕೊಂಡು, “ಕೃಷಣ,
ನೀನು ತಂದೆ ತಾಯಿಗಳನ್ನು ನೋಡಲು ಬಯಸುವುದು ಸಹಜವೇ. ನಾವು
ಬೇಡವೆನ್ನುವುದಿಲ್ಲ. ಆದರೆ, ಕೃಷಣ, ನಾವು ನಿನ್ನನ್ನು ಬಿಟ್ಟು ಹೇಗೆ
ಇರಲು ಸಾಧ್ಯ? ನನ್ನ ಒಂದು ಭಾಗವೇ ಆದ ನಿನ್ನನ್ನು ಹೇಗೆ ಕಳಿಸಲಿ? ಹಿಂದೆ
ಇಂದ್ರಪ್ರಸ್ಥದಲ್ಲಿದ್ದಾಗ ಹೇಳಿದ್ದೆಯಲ್ಲ, ಹಾಗೆ ನಾವು
ಸ್ಮರಿಸಿಕೊಂಡೊಡನೆ ಬರುವುದಾದರೆ, ಹೋಗಿ ಬಾ. ಆಗ ನಮಗೆ ಕಷ್ಟ ಬಂದಾಗ,
ಕೃಷಾಣ ಎಂದೊಡನೆ ಬಂದೊದಗುತ್ತಿದ್ದೆ. ಈಗಲೂ ಹಾಗೆಯೇ ಬರಬೇಕು” ಎಂದು
ಕೃಷಣನನ್ನು ಆಲಿಂಗಿಸಿಕೊಡು, ದ್ವಾರಕೆಗೆ ಕಳಿಸಲೊಪ್ಪಿದ.
ದಾರುಕನು ರಥವನ್ನು ಮಹಾದ್ವಾರದಲ್ಲಿ ತಂದಿರಿಸಿಕೊಂಡು ಕಾಯುತ್ತಿದ್ದ.
ವಿದಾಯ ಹಾರ್ದಿಕವಾಗಿತ್ತು. ಪಾಂಡವರನ್ನು ಬಿಟ್ಟುಹೋಗಬೇಕಲ್ಲಾ ಎಂದು
ಸಾತ್ಯಕಿ ಬಿಕ್ಕಿ ಬಿಕ್ಕಿ ಅಳುತ್ತಿದ್ದ. ಭೀಮ ಕಲ್ಲಿನ ಗೊಂಬೆಯಂತೆ
ನಿಂತ್ತಿದ್ದ. ಕೃಷ್ಣ ಅವರೆಲ್ಲರನ್ನೂ ಬೀಳ್ಕೊಂಡ. ಧೃತರಾಷ್ಟ,
ಗಾಂಧಾರಿ, ಕುಂತಿ, ವಿದುರ, ಯುಧಿಷ್ಠಿರ, ಭೀಮ ಇವರೆಲ್ಲರಿಗೂ ನಮಸ್ಕರಿಸಿ
ಆಶೀರ್ವಾದ ಪಡೆದ. ದ್ರೌಪದಿ ಕೈಬೀಸಿದಳು. ರಥ ಕಾಯುತ್ತಿತ್ತು. ಕೃಷ್ಣ
ಸಾತ್ಯಕಿ ಇಬ್ಬರೂ ಹೊರಡಲಾರದೆ ಹೊರಟರು. ಎಲ್ಲರೂ ರಥ
ಕಣ್ಮರೆಯಾಗುವವರೆಗೂ ನೋಡುತ್ತಿದ್ದರು.
* * * *
ಯುಧಿಷ್ಠಿರನ ಆಸ್ಥಾನಕ್ಕೆ ವ್ಯಾಸನ ಆಗಮನವಾಯಿತು. ರಾಜನ ದುಃಖ ಇನ್ನೂ
ಆರಿಲ್ಲವೆಂದು ತಿಳಿದಿದ್ದ ಅವನು “ಯುಧಿಷ್ಠಿರ, ನೀನು
ಆಶ್ವಮೇಧಯಾಗವನ್ನು ಮಾಡು. ಅದರಿಂದ ನಿನ್ನ ಮನಸ್ಸಿನ ದುಗುಡ
ಪರಿಹಾರವಾಗುತ್ತದೆ. ರಾಜನಾದವನು ಅದನ್ನು ಮಾಡಬೇಕಾದದ್ದೇ” ಎಂದು
ಸಲಹೆಯಿತ್ತನು. ಆಶ್ವಮೇಧವೆಂದರೆ ತುಂಬ ಸಂಪತ್ತು ಅಗತ್ಯವಾಗುತ್ತದೆ.
ಮರುತ್ತುಗಳು ಹಿಮಾಲಯದಲ್ಲಿ ಹುದುಗಿಸಿಟ್ಟಿರುವ ಅಗಾಧ ಐಶ್ವರ್ಯವನ್ನು
ತಂದುಕೊಳ್ಳಬೇಕು. ವ್ಯಾಸನ ಸಲಹೆಯು ರಾಜನನ್ನು ಪುಳಕಿತನನ್ನಾಗಿ ಮಾಡಿತು.
ಉಳಿದ ಪಾಂಡವರಿಗೂ ಉತ್ಸಾಹವಾಯಿತು. ಅಣ್ಣನು ಉತ್ಸಾಹವನ್ನು ಕಂಡು ಭೀಮನಿಗೆ
ತುಂಬ ಸಂತೋಷವಾಯಿತು. ಮತ್ತೊಮ್ಮೆ ಯುದ್ಧ, ಹೋರಾಟ ಎಂದು ಅರ್ಜುನನಿಗೂ
ಉತ್ಸುಕತೆ ಮೂಡಿತು. ಯಜ್ಞಾಶ್ವದೊಂದಿಗೆ ದಿಗ್ವಿಜಯಕ್ಕಾಗಿ ನಾನೇ
ಹೋಗುವೆನೆಂದ. ಯಾಗ ಮಾಡುವುದೆಂದು ತೀರ್ಮಾನವಾದೊಡನೆ ಕೃಷ್ಣನಿಗೆ ಕರೆ
ಹೋಯಿತು. ಬಲರಾಮ ಹಾಗೂ ವೃಷ್ಣಿಗಳೆಲ್ಲರನ್ನೂ ಕರೆದುಕೊಂಡು ಆದಷ್ಟು ಬೇಗ
ಹಸ್ತಿನಾಪುರಕ್ಕೆ ಬರಬೇಕು ಎಂದು. ರಾಜ್ಯಾಡಳಿತವನ್ನು ಯುಯುತ್ಸುವಿಗೊಪ್ಪಿಸಿ,
ಯುಧಿಷ್ಠಿರನು ತಮ್ಮಂದಿರೊಂದಿಗೆ ಹಿಮಾಲಯಕ್ಕೆ ಹೊರಟ. ಹಿಮಾಲಯವೆಂದೊಡನೆ
ಅವನ ಹೃದಯ ಹಗುರವಾಯಿತು. ವ್ಯಾಸನ ಸಲಹೆಯನ್ನು ಬಹುವಾಗಿ ಮೆಚ್ಚಿಕೊಂಡ.
ಆನುದಿನವೂ ಅನುಕ್ಷಣವೂ ಹೊಸತು ಇರುತ್ತಿದ್ದುದರಿಂದ, ಹಳೆಯ ದುಃಖವನ್ನೇ
ಮೆಲುಕುಹಾಕುವುದು ಮರೆಯುತ್ತ ಬಂತು.
ಪಾಂಡವರು ತಮ್ಮ ಪ್ರೀತಿಯ ಹಿಮಾಲಯಕ್ಕೆ ಹೋಗಿ ಕೆಲವು ದಿನ
ಇದ್ದರು. ಅನಂತರ ಮರುತ್ತುಗಳು ಸಂಗ್ರಹಿಸಿಟ್ಟಿದ್ದ ಐಶ್ವರ್ಯದಲ್ಲಿ
ತಮಗೆ ಬೇಕಾದಷ್ಟನ್ನು ತೆಗೆದುಕೊಂಡು ಹಸ್ತಿನಾಪುರಕ್ಕೆ
ಹಿಂದಿರುಗಿದರು. ಅವರು ಬರುವ ವೇಳೆಗೆ ಅಲ್ಲಿ ಇಡೀ ವೃಷ್ಣಿಸಮುದಾಯವೇ
ಬಂದು ನೆರೆದಿತ್ತು. ಅಭಿಮನ್ಯುವಿನ ಮಗುವಿಗೆ ಗರ್ಭವಾಸವು ಮುಗಿಯುತ್ತ
ಬಂದಿದ್ದು, ಉತ್ತರೆಯ ಪ್ರಸೂತಿ ಇಂದೋ ನಾಳೆಯೋ ಎಂದು ಎಲ್ಲರೂ
ನಿರೀಕ್ಷಿಸುತ್ತಿದ್ದರು. ಹುಟ್ಟುವಾಗ ಮಗು ಬದುಕಿರುವುದಿಲ್ಲ ಎಂದು
ಕೃಷ್ಣನಿಗೆ ಗೊತ್ತಿತ್ತು. ಬ್ರಹ್ಮಶೀರ್ಷಾಸ್ತ್ರದಿಂದ ಅದು ಸತ್ತಿದ್ದರೂ,
ಅದನ್ನು ಬದುಕಿಸುವೆನೆಂದು ಷ್ಣನು ಪ್ರತಿಜ್ಞೆಮಾಡಿದ್ದನು. ಪೌರವ
ಸಿಂಹಾಸನದ ಮುಂದಿನ ಅಧಿಪತಿಯನ್ನು ಬದುಕಿಸುವುದಕ್ಕಾಗಿಯೇ ಷ್ಣನು
ಎಲ್ಲರನ್ನೂ ಕರೆದುಕೊಂಡು ಬೇಗನೇ ಹಸ್ತಿನಾಪುರಕ್ಕೆ ಬಂದಿದ್ದನು. ಕೆಲವು
ದಿನಗಳು ಸುಖವಾಗಿ ಕಳೆದವು. ಉತ್ತರೆಯ ಪ್ರಸೂತಿಯ ದಿನವೂ
ಬಂದಿತು. ನಿರೀಕ್ಷಿಸಿದಂತೆ ಮೃತ ಶಿಶುವಿನ ಜನನವಾಗಿತ್ತು. ಕೃಷ್ಣ
ಸಾತ್ಯಕಿ ಇಬ್ಬರೂ ಪ್ರಸೂತಿಗೃಹಕ್ಕೆ ಧಾವಿಸಿದರು. ಕುಂತಿ ಭೋರೆಂದು
ಅಳುತ್ತ ಹೊರಗೆ ಬರುತ್ತಿದ್ದವಳು. “ಪಾಂಡವರ ಆಶೋತ್ತರಗಳಿಗೆ ನೀನೇ
ಜೀವ ತುಂಬಬೇಕು. ಈಗ ನಿನ್ನೊಬ್ಬನ ಮೇಲೆಯೇ ನಾವೆಲ್ಲರೂ
ಭರವಸೆಯನ್ನಿಟ್ಟುಕೊಂಡಿರುವುದು” ಎನ್ನುತ್ತ ಕುಸಿದು ಬಿದ್ದಳು. ಕೃಷ್ಣನು
ಅವಳನ್ನು ಮೇಲಕ್ಕೆತ್ತಿ “ಅತ್ತೆ, ಹೆದರಬೇಡಿ. ನನ್ನ ಪುಣ್ಯವನ್ನೆಲ್ಲ
ಧಾರೆಯೆರೆದಾದರೂ ನಾನು ಮಗುವನ್ನು ಬದುಕಿಸುತ್ತೇನೆ” ಎನ್ನುತ್ತಾ ಒಳಗೆ
ಹೋದನು ಅಲ್ಲಿ
ದ್ರೌಪದಿ, ಸುಭದ್ರೆ ಮತ್ತಿತರ ಸ್ತ್ರೀಯರಿದ್ದರು. ಷ್ಣನನ್ನು
ನೋಡಿದೊಡನೆ ಉತ್ತರೆಯು ಧಿಗ್ಗನೆದ್ದು ಅವನ ಪಾದಗಳ ಮೇಲೆ ಬಿದ್ದು
ಮೂರ್ಛೆಹೋದಳು. ಷ್ಣನು ಅವಳನ್ನೆತ್ತಿ ಮಂಚದ ಮೇಲೆ ಮಲಗಿಸಿದನು.
ಷ್ಣನು ತಶಿಶುವನ್ನು ನೋಡಿದನು. ತನ್ನ ಪ್ರೀತಿಯ ಅಭಿಮನ್ಯುವಿನ
ನೆನಪಾಗಿ ಉಳಿದಿರುವುದು ಇಷ್ಟೆ! ಇದನ್ನು ಉಳಿಸಲೇಬೇಕು. ಷ್ಣನ ಮುಖ
ಗಂಭೀರವಾಯಿತು. ದಿವ್ಯ ಮಂದಹಾಸ ಮಾಯವಾಯಿತು. ಅಲೌಕಿಕನಾಗಿ ಕಂಡ
ಅವನನ್ನು ಎಲ್ಲರೂ ಆಶ್ಚರ್ಯದಿಂದ ನೋಡುತ್ತಿದ್ದರು. ಇದ್ದಕ್ಕಿದ್ದಂತೆ
ಷ್ಣನು ಮಗುವನ್ನು ಕೈಗೆತ್ತಿಕೊಂಡನು. ಅವನ ಕರಪಲ್ಲವಗಳು ಅದರ
ಶರೀರದ. ಮೇಲೆ ಹರಿದಾಡುತ್ತಿದ್ದಂತೆ ಮಗುವಿಗೆ ಜೀವ ಬಂದು ಗಟ್ಟಿಯಾಗಿ
ಅಳಲಾರಂಭಿಸಿತು. ಷ್ಣನಿಗೆ ಬಹಳ ಆಯಾಸವಾಗಿದ್ದಿತು. ಬೆವರು
ಧಾರಾಕಾರವಾಗಿ ಸುರಿಯಲಾರಂಭಿಸಿತು. ಪ್ರಸೂತಿ ಹದಿಂದ ಹೊರಗೆ ಬಂದು
ಅಲ್ಲಿದ್ದ ಕಲ್ಲೊಂದರ ಮೇಲೆ ಕುಳಿತುಕೊಂಡನು. ಅಲ್ಲಿದ್ದ ಸಾತ್ಯಕಿಗೆ
ಮಗುವಿನ ಅಳು ಕೇಳಿಸಿತು. ಷ್ಣ ಸುಸ್ತಾಗಿ ಕುಳಿತುಕೊಳ್ಳುತ್ತಿರುವುದೊ
ಕಾಣಿಸಿತು. ಷ್ಣ ಸಮಾಧಿಸ್ಥನಾಗಿರುವನೋ ಎಂದು ಅವನಿಗೆ
ಸಂದೇಹ. ಸಾತ್ಯಕಿ ಬಹಳ ಹೊತ್ತು ಕಾದನು. ತನ್ನ ಆಧ್ಯಾತ್ಮಿಕ
ಶಕ್ತಿಯನ್ನೆಲ್ಲ ಮಗುವಿಗೆ ಜೀವ ಕೊಡಲು ಬಳಸಿಬಿಟ್ಟಿರುವುದು ಅವನಿಗೆ
ಗೊತ್ತಾಯಿತು. ಷ್ಣನ ಆತ್ಮವು ಪರಬ್ರಹ್ಮನೊಂದಿಗೆ ಐಕ್ಯವಾಗಿ ಆ
ಶಕ್ತಿಯನ್ನು ಪುನಃ ಪಡೆದುಕೊಳ್ಳಲೆಂದು ಸಾತ್ಯಕಿ ತಾಳ್ಮೆಯಿಂದ ಕಾದು
ಕುಳಿತನು.
ಷ್ಣನಿಗೆ ಎಚ್ಚರವಾಯಿತು. ಅವನ ಮುಖವು ಯಾವುದೋ ಅಲೌಕಿಕ ತೇಜಸ್ಸಿನಿಂದ
ಹೊಳೆಯುತ್ತಿದ್ದಿತು. ಅದ್ಬುತ ಅನುಭವವೊಂದರಿಂದ ಹೊರಬಂದಂತೆ
ಕಾಣುತ್ತಿದ್ದನು. ಸಾತ್ಯಕಿಯು, “ ಅಂತೂ ಅಭಿಮನ್ಯು ಪುನಃ ಬದುಕಿ
ಬಂದಂತಾಯಿತು. ಷ್ಣ, ಇದು ಕುರುಕ್ಷೇತ್ರ ಯುದ್ದವನ್ನು
ಗೆದ್ದುದಕ್ಕಿಂತಲೂ ದೊಡ್ಡ ಸಾಧನೆ!’’ ಎನ್ನಲು, ಷ್ಣನು, “ ಹೌದು
ಸಾತ್ಯಕಿ, ಇದು ಯುದ್ಧದಲ್ಲಿ ಗೆದ್ದುದಕ್ಕಿಂತಲೂ ಕಷ್ಟಕರವಾಗಿದ್ದಿತು’’
ಎಂದನು. ಇಬ್ಬರೂ ಕೈ ಕೈ ಹಿಡಿದುಕೊಂಡು ಅಲ್ಲಿಂದ ಹೊರಟು ಹೋದರು.
ಅರಮನೆಯಲ್ಲಿ ಸಂಭ್ರಮವೋ ಸಂಭ್ರಮ, ಸಂತೋಷವೋ ಸಂತೋಷ. ಇಡೀ
ರಾಜ್ಯವೇ ಕೌರವ ಸಿಂಹಾಸನದ ಉತ್ತರಾಧಿಕಾರಿಯ ಜನ್ಮ
ಮಹೋತ್ಸವವನ್ನು ಆಚರಿಸಿ ನಲಿಯಿತು. ತಿಂಗಳು ಕಳೆದ ಮೇಲೆ ಶಿಶುವಿಗೆ
ಪರೀಕ್ಷಿತ್ ಎಂದು ನಾಮಕರಣ ಮಾಡಿದರು. ಸಂಭ್ರಮದಲ್ಲಿ ಸುಭದ್ರೆ ಸಹ
ತನ್ನ ಅಭಿಮನ್ಯುವಿಲ್ಲದ ದುಃಖವನ್ನು ಮರೆತಳು.
ಯುಧಿಷ್ಠಿರಾದಿಗಳು ಹಿಮಾಲಯದಿಂದ ಬರುತ್ತಿರುವರೆಂದು ಸುದ್ದಿ ಬಂದಿತು.
ಷ್ಣನೇ ಮೊದಲಾದವರು ಅರ್ಧದೂರ ಹೋಗಿ ಅವರನ್ನು ಎದುರುಗೊಂಡರು. ಎಲ್ಲರೂ
ಉತ್ಸಾಹದಿಂದ ನಗರಕ್ಕೆ ಹಿಂದಿರುಗಿದರು. ಅಷ್ಟರಲ್ಲಿ ವ್ಯಾಸನ
ಆಗಮನವಾಯಿತು. ಅಶ್ವಮೇಧಕ್ಕೆ ಸಿದ್ಧತೆಗಳು
ಪ್ರಾರಂಭವಾದವು. ನವಜಾತ ಶಿಶುವನ್ನು ನೋಡಿ ಯುಧಿಷ್ಠಿರನು
ದುಃಖವೆಲ್ಲವನ್ನೂ ಮರೆತನು. ಭೀಮನು ತನ್ನ ಮಹಾಬಾಹುವಿನಲ್ಲಿ
ಮಗುವನ್ನೆತ್ತಿಕೊಂಡಿರುವುದನ್ನು ನೋಡುವುದೇ ತಮಾಷೆ. ಅವನಿಗಂತೂ
ಮೊಮ್ಮಗನ ಮೇಲೆ ಇನ್ನಿಲ್ಲದಷು ಪ್ರೀತಿ.
ಯುಧಿಷ್ಠಿರನು ಷ್ಣನನ್ನು ಕುರಿತು,“ ಷ್ಣ, ನಮಗಾಗಿ ರಾಜ್ಯವನ್ನು
ಗೆದ್ದುಕೊಟ್ಟ ನೀನೇ ಈ ಅಶ್ವಮೇಧಯಾಗವನ್ನು ಮಾಡಬೇಕು. ಇದು ನನ್ನ
ಕೋರಿಕೆ’’ ಎನ್ನಲು, ಷ್ಣನು ನಕ್ಕು, “ ನೀನು ಈ ರಾಜ್ಯದ ದೊರೆ,
ನಮಗೆಲ್ಲರಿಗೂ ಯಜಮಾನ. ಚಂದ್ರವಂಶದ ದೊರೆಗಳೇ ಅಶ್ವಮೇಧವನ್ನು
ಮಾಡುವುದು ಸಂಪ್ರದಾಯ. ನೀನು ನಹುಷನಂತೆ, ಹರಿಶ್ಚಂದ್ರನಂತೆ ಆಗುವೆ
ಎಂದು ನಿನ್ನಜ್ಜ ಹೇಳಿರುವನು. ನಿನಗೆ ಇದರಲ್ಲಿ ನೆರವಾಗುವುದೇ ನನಗೊಂದು
ದೊಡ್ಡ ಸಂತೋಷ, ಹೆಮ್ಮೆ. ನನ್ನೆಲ್ಲ ಕನಸುಗಳೂ ನನಸಾದವು; ನಾನಿಂದು
ತುಂಬ ಸುಖಿ’’ ಎಂದನು. ಯುಧಿಷ್ಠಿರನು ದುಃಖವನ್ನು ತೊರೆದು ರಾಹುಮುಕ್ತನಾದ
ಸೂರ್ಯನಂತೆ ಪ್ರಕಾಶಿಸುತ್ತಿರುವುದು ಷ್ಣನಿಗೆ ಅನಂದವನ್ನುಂಟು
ಮಾಡಿದ್ದಿತು.
ಯಾಗದ ಕುದುರೆಯನ್ನು ಮುಂದಿಟ್ಟುಕೊಂಡು ಅರ್ಜುನನು ದಿಗ್ವಿಜಯಕ್ಕೆ ಹೊರಟನು.
ನಾಲ್ಕು ದಿಕ್ಕುಗಳ ದಿಗ್ವಿಜಯವೂ ಹೂವೆತ್ತಿದಂತೆ ಸುಲಭವಾಗಿದ್ದಿತು.
ಕಪ್ಪವನ್ನೊಪ್ಪಿಸಿದ ದೊರೆಗಳೆಲ್ಲರನ್ನು ಅವನು ಹಾರ್ದಿಕವಾಗಿ ಯಾಗಕ್ಕೆ
ಬರಬೇಕೇದು ಆಹ್ವಾನಿಸಿ, ಹಸ್ತಿನಾಪುರಕ್ಕೆ ಹಿಂದಿರುಗಿದನು. ಭೀಮ ನಕುಲ
ಸಹದೇವರುಗಳು ಯಾಗದ ಏರ್ಪಾಟುಗಳ ಅಧೀಕ್ಷಕರಾಗಿದ್ದರು. ವರ್ಷಗಳ
ಹಿಂದೆಯೇ ರಾಜಸೂಯಯಾಗ ಮಾಡಿದ ಅನುಭವವಿದ್ದುದರಿಂದ, ಅಲ್ಲದೆ ಷ್ಣನೂ
ಷ್ಣಿವೀರರೂ ಇದ್ದುದರಿಂದ ಯಾರಿಗೂ ವಿಶೇಷ ಕಷ್ಟವೆನಿಸಲಿಲ್ಲ.
ಅಶ್ವಮೇಧ ಯಾಗವು ಮುಗಿದ ಮೇಲೆ ರಾಜರೆಲ್ಲರೂ ಯುಧಿಷ್ಠಿರನಿಂದ
ಸನ್ಮಾನಿತರಾಗಿ ಅವರವರ ದೇಶಗಳಿಗೆ ಹೊರಟರು. ಷ್ಣ ಬಲರಾಮ
ಸಾತ್ಯಕಿ ಮತ್ತಿತರ ಷ್ಣಿವೀರರುಗಳೂ ದ್ವಾರಕೆಗೆ ಹಿಂದಿರುಗಿದರು.