ಪರಿವಿಡಿ

This book is available at Ramakrishna Ashrama, Mysore.

ಆಶ್ರಮವಾಸಿಕಪರ್ವ

ಹದಿನೈದು ವರ್ಷಗಳು ಕಳೆದವು. ಆದರ್ಶಪುರುಷನೆನ್ನಿಸಿಕೊಂಡ ಯುಧಿಷ್ಠಿರನ ರಾಜ್ಯಾಡಳಿತವೂ ಅದರ್ಶಪ್ರಾಯವಾಗಿತ್ತು. ಯುಧಿಷ್ಠಿರನು ವ್ಯಾಸನ ಸಲಹೆಯಂತೆ



ಪಾಚಾರ್ಯನನ್ನು ಪರೀಕ್ಷಿತ್ತಿಗೆ ಗುರುವಾಗಿ ನಿಯಮಿಸಿದನು. ರಾಜನು ಬಹು ಸಮರ್ಥನಾಗಿದ್ದುದರಿಂದ ಹಸ್ತಿನಾವತಿಯ ಜನರೆಲ್ಲರೂ ಸುಖವಾಗಿದ್ದರು.





ತರಾಷ್ಟ್ರನಿಗೆ ಮಾತ್ರ ಸುಖವಿರಲಿಲ್ಲ. ಯುಧಿಷ್ಠಿರನೇನೋ ಅವನನ್ನು ಮಹಾರಾಜನೆಂದು ಗೌರವಿಸುತ್ತ ತಂದೆಯೆಂಬಂತೆ ಪ್ರೀತಿಸುತ್ತಿದ್ದರೂ, ಮುದುಕನು ಯಾವಾಗಲೂ ಗತಿಸಿದ ತನ್ನ ಮಗ ದುರ್ಯೋಧನನನ್ನೇ ಚಿಂತಿಸುತ್ತಿದ್ದನು. ಮಗನು ಗತಿಸಿದ ಕೊರಗನ್ನು ಮರೆಯಲಾರದ ಅವನು ವಾನಪ್ರಸ್ಥಕ್ಕಾಗಿ ಹಂಬಲಿಸತೊಡಗಿದ್ದನು. ಗಾಂಧಾರಿಯೂ ಇದೇ ತೀರ್ಮಾನಕ್ಕೆ ಬಂದಿದ್ದಳು. ಒಂದು ಕಾಲದಲ್ಲಿ ತನ್ನ ಮಗನ ಆಳ್ವಿಕೆಯಿದ್ದ ಈ ನಗರವನ್ನು ಬಿಟ್ಟುಹೋಗಬೆಕೆಂದು ಇಬ್ಬರೂ ಬಯಸಿದರು. ಯುಧಿಷ್ಠಿರನನ್ನು ಕರೆಸಿ ತನ್ನ ಅಭಿಪ್ರಾಯವನ್ನು ತಿಳಿಸಲು, ದೊಡ್ಡಪ್ಪನ ಧೋರಣೆಯನ್ನು ಕಂಡು ಅವನಿಗೆ ಬಹಳ ಬೇಜಾರಾಯಿತು. ಎಷ್ಟು ಸಮಾಧಾನ ಹೇಳಿದರೂ ಒಪ್ಪದ





ತರಾಷ್ಟ



ನದು ಒಂದೇ ಹಟ. ಕೊನೆಗೆ ವ್ಯಾಸನು ಬಂದು ಯುಧಿಷ್ಠಿರನಿಗೆ ದೊಡ್ಡಪ್ಪನನ್ನು ಅರಣ್ಯವಾಸಕ್ಕೆ ತೆರಳಲು ಬಿಡುವುದೇ ಉಚಿತ ಎಂದು ಸಲಹೆಮಾಡಿದನು. ಪ್ರಾಪಂಚಿಕ ಆಸೆಗಳನ್ನೆಲ್ಲ ತೊರೆದು



ದ್ಧಾಪ್ಯದಲ್ಲಿ ವಾನಪ್ರಸ್ಥರಾಗುವುದು ಸಂಪ್ರದಾಯವೇ ಆಗಿದ್ದಿತು. ಇದರಿಂದಾಗಿ, ಇಷ್ಟವಿಲ್ಲದಿದ್ದರೂ ಕೊನೆಗೆ ಯುಧಿಷ್ಠಿರನು





ತರಾಷ್ಟ್ರನ ಮಾತಿಗೆ ಒಪ್ಪಬೇಕಾಯಿತು. ಅದರೆ ಕುಂತಿಯೂ ಅವರಿಬ್ಬರೊಟ್ಟಿಗೆ ತಾನೂ ಹೋಗುವೆನೆಂದಾಗ, ಯುಧಿಷ್ಠಿರನಿಗೆ ಆಘಾತವಾಯಿತು. ಪಾಂಡವರು ದ್ರೌಪದಿ ಸುಭದ್ರೆ ಉತ್ತರೆ ಎಲ್ಲರೂ ವಿಧವಿಧವಾಗಿ ಮನವೊಲಿಸಲೆತ್ನಿಸಿದರೂ ಕುಂತಿ ಕೇಳಲಿಲ್ಲ. ತಾನು ರಾಧೇಯನಿಗೆ ಮಾಡಿದ ಅನ್ಯಾಯದ ಪಾಪವನ್ನು ತಪಸ್ಸಿನಿಂದ ಪರಿಹರಿಸಿಕೊಳ್ಳಬೇಕು ಎಂಬುದು ಅವಳ ಒಂದೇ ಮಾತು. ಕೊನೆಗೂ ಅವಳನ್ನೂ ಪಾಂಡವರು ಕಳುಹಿಸಬೇಕಾಯಿತು. ಜೊತೆಯಲ್ಲಿ ವಿದುರ ಸಂಜಯರೂ ಹೊರಟರು. ಮಾರನೆಯ ಬೆಳಗ್ಗೆ, ಪುರಜನರೆಲ್ಲ ದುಃಖಿಸುತ್ತಿರುವಾಗ ಈ ಐದು ಜನರೂ ಹಸ್ತಿನಾಪುರದಿಂದ ಗಂಗಾತೀರದ ವ್ಯಾಸಾಶ್ರಮದ ಕಡೆಗೆ ನಡೆದುಕೊಂಡೇ ಹೊರಟರು, ಅಲ್ಲಿ ಕೆಲವು ದಿನಗಳಿದ್ದು ಋಷಿಗಳ ಮಾತಿನಿಂದ ತಮ್ಮ



ದಯದ ದುಃಖವನ್ನು ಕಡಿಮೆಮಾಡಿಕೊಳ್ಳುವ ಉದ್ದೇಶವು ಅವರಿಗಿದ್ದಿತು.

ಯುಧಿಷ್ಠಿರನಿಗೆ ತನ್ನ ತಾಯಿಯ ವಿಯೋಗವನ್ನು ಸಹಿಸುವುದು ಕಷ್ಟವಾಯಿತು. ಸಹದೇವನಿಗೂ ಹಾಗೆಯೇ ಅನಿಸತೊಡಗಿತು. ಒಂದು ದಿನ ಇದ್ದಕ್ಕಿದ್ದಂತೆ ಅವರು ಕಾಡಿಗೆ ಹೋಗಿ ತಮ್ಮ ತಾಯಿಯನ್ನೂ





ತರಾಷ್ಟ



ಗಾಂಧಾರಿಯರನ್ನೂ ಕಂಡುಬರಬೇಕೆಂದು ನಿರ್ಧರಿಸಿದರು. ಆಹ್ಲಾದಮಯ ಪ್ರಯಾಣದ ನಂತರ ಅವರೆಲ್ಲರೂ ಇದ್ದ ಆಶ್ರಮವನ್ನು ಸೇರಿದರು. ಇವರು ಹೋದಾಗ ಅವರುಗಳು ನದಿಗೆ ಹೋಗಿದ್ದವರು ಆಶ್ರಮಕ್ಕೆ ಬರುತ್ತಿದ್ದರು. ಸಹದೇವ ಓಡಿಹೋಗಿ ಕುಂತಿಯ ಪಾದಗಳಿಗೆ ನಮಸ್ಕರಿಸಿದ. ತನ್ನ ಪ್ರೀತಿಯ ಸಹದೇವ ಬಂದುದಕ್ಕಾಗಿ ಅವಳಿಗೆ ಬಹಳ ಸಂತೋಷವಾಯಿತು. ಎಲ್ಲರೂ ಆಶ್ರಮದಲ್ಲಿ ಕುಳಿತುಕೊಂಡರು. ಕೆಲಹೊತ್ತು ಸುಮ್ಮನಿದ್ದ ಬಳಿಕ, ಹಿರಿಯರೆಲ್ಲ ಹೊರಟು ಬಂದ ಮೇಲೆ ಹಸ್ತಿನಾಪುರದಲ್ಲಿ ಏನೇನಾಯಿತು ಎಂಬುದನ್ನು ಹೇಳಿದರು. ಇದ್ದಕ್ಕಿದ್ದಂತೆ ಯುಧಿಷ್ಠಿರನು“ವಿದುರ ಚಿಕ್ಕಪ್ಪನೆಲ್ಲಿ?’’ ಎಂದು ಕೇಳಿದ. ವಿದುರನು ವಾತಾಹಾರಿಯಾಗಿದ್ದುಕೊಂಡು ಕಾಡಿನೊಳಗೆ ಏಕಾಂಗಿಯಾಗಿ ತಪಸ್ಸು ಮಾಡುತ್ತಿರುವನಿಂದು ತಿಳಿಸಿದರು. ಅಷ್ಟರಲ್ಲಿ ದೂರದಿಂದ ಕಂಡ ವಿದುರನನ್ನು ಯಾರೋ ತೋರಿಸಿದರು. ಯುಧಿಷ್ಠಿರನು ವಿದುರನಿದ್ದಲ್ಲಿಗೆ ಹೋದ. ವಿದುರನ ಶರೀರ ಕೇವಲ ಚರ್ಮದಿಂದ ಆ



ತವಾಗಿದ್ದ ಮೂಳೆಯ ಹಂದರದಂತಿತ್ತು. ಅದರೆ ಕಣ್ಣುಗಳಲ್ಲಿನ ಪ್ರಕಾಶ ಮಾತ್ರ ಅಸಾಮಾನ್ಯವಾಗಿತ್ತು. ಯುಧಿಷ್ಠಿರನು ಅವನ ಬಳಿಗೆ ಹೋಗಿ “ ಚಿಕ್ಕಪ್ಪ, ನಾನು ಯುಧಿಷ್ಠಿರ. ನನ್ನೊಂದಿಗೆ ಮಾತನಾಡುವುದಿಲ್ಲವೆ?’’ ಎಂದ. ಮರವೊಂದನ್ನು ಒರಗಿ ನಿಂತಿದ್ದ ವಿದುರನು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಯಾವುದೂ

ಶಕ್ತಿಯಿಂದ ಪ್ರೇರಿತನಾದವನಂತೆ ಯುಧಿಷ್ಠಿರನು ವಿದುರನ ಕಣ್ಣಲ್ಲಿ ಕಣ್ಣಿಟು



ನೋಡಿದ. ವಿದುರನು



ಷ್ಟಿಮಾಧ್ಯಮದ ಮೂಲಕವೇ ಯುಧಿಷ್ಠಿರನನ್ನು ಪ್ರವೇಶಿಸಿದ. ತಾನು ಇದ್ದಕ್ಕಿದ್ದಂತೆ ಹೆಚ್ಚು ವಿವೇಕಿಯಾದಂತಿಯೂ ಬಲವನ್ನು ಪಡೆದಂತಿಯೂ ಯುಧಿಷ್ಠಿರನಿಗೆ ಅನ್ನಿಸಿತು. ತಾನು ಬೇರೇಯೇ ವ್ಯಕ್ತಿಯಾಗಿಬಿಟ್ಟಂತೆ ಅನ್ನಿಸಿತು; ಮರುಕ್ಷಣದಲ್ಲಿ ನೋಡಲಾಗಿ ವಿದುರನು ದೇಹತ್ಯಾಗ ಮಾಡಿಬಿಟ್ಟಿದ್ದ. ಅಗ “ ನಿನ್ನ ಹಾಗೆಯೇ ವಿದುರನೂ ಧರ್ಮನ ಅವತಾರ. ಅವನೀಗ ನಿನ್ನ ಶರೀರದ ಒಳಗೆ ಸೇರಿಕೊಂಡಿರುವನು. ಅವನೇ ನೀನಾಗಿರುವುದರಿಂದ ನೀನು ಅವನ ಶರೀರಕ್ಕೆ ಸಂಸ್ಕಾರಾದಿಗಳನ್ನು ಮಾಡುವಂತಿಲ್ಲ. ಆ ಶರೀರವನ್ನು ಹಾಗೆಯೇ ಬಿಟ್ಟು ಹೋಗಿ ನಿನ್ನ ಸೋದರರನ್ನು ಸೇರಿಕೋ” ಎಂದು ಅಶರೀರವಾಣಿಯಾಯಿತು. ಯುಧಿಷ್ಠಿರನು ಆಶ್ರಮಕ್ಕೆ ಹಿಂದಿರುಗಿ





ತರಾಷ್ಟ್ರಾದಿಗಳಿಗೆ ತನ್ನ ವಿಚಿತ್ರ ಅನುಭವವನ್ನು ನಿವೇದಿಸಿದ.

ಕೆಲವು ದಿನಗಳನ್ನು ಹಿರಿಯರೊಂದಿಗೆ ಕಳೆದ ನಂತರ ಅವರು ಇನ್ನು ಹಸ್ತಿನಾಪುರಕ್ಕೆ ಹಿಂದಿರುಗಿರಿ ಎಂದು ಜ್ಞಾಪಿಸಿದರು. ಕುಂತಿಯನ್ನು ಬಿಟ್ಟು ಹೋಗಲು ಅವರಿಗೆ ಮನಸ್ಸೇ ಬಾರದಾಯಿತು. ಕುಂತಿಯು ಅವರನ್ನು ಆಲಂಗಿಸಿ “ ಮಗು, ನಾವು ಪುನಃ ಭೇಟಿಯಾಗುವೆವೋ ಇಲ್ಲವೋ ತಿಳಿಯದು. ಸಹದೇವನು ದೊಡ್ಡವನಾದರೂ ನನಗೆ ಅವನಿನ್ನೂ ಮಗುವೇ. ಅವನನ್ನು ಚೆನ್ನಾಗಿ ನೋಡಿಕೋ. ಉಳಿದವರನ್ನೂ ಚೆನ್ನಾಗಿ ನೋಡಿಕೋ, ನೀನೂ ಚೆನ್ನಾಗಿ ರಾಜ್ಯವಾಳಿಕೊಂಡಿರು. ನಿಮಗೆಲ್ಲರಿಗೂ ನಾನು ಆಶೀರ್ವದಿಸುತ್ತೇನೆ’’ ಎನ್ನಲು, ಕಣ್ಣೀರಿಡುತ್ತ ಅವರು ರಥವನ್ನು ಹತ್ತಿದರು. ರಥವು ಹಸ್ತಿನಾಪುರದ ಕಡೆಗೆ ಹೊರಟಿತು.

ಇದಾದ ಎರಡು ವರ್ಷಗಳ ನಂತರ ನಾರದನು ಹಸ್ತಿನಾಪುರಕ್ಕೆ ಬಂದನು. ನಾರದನು ಬಂದನೆಂದರೆ ಏನಾದರೂ ವಿಶೇಷವಿರುವುದು ಖಂಡಿತ. ಪಾಂಡವರೆಲ್ಲರೆದುರಿಗೆ ನಾರದ ಮಹರ್ಷಿಯು “ ಅಪ್ಪಾ ಯುಧಿಷ್ಠಿರ, ನಿನಗೆ ದುಃಖದ ಸಮಾಚಾರವನ್ನು ತಂದಿರುವೆ. ನಿನ್ನ ದೊಡ್ಡಪ್ಪ





ತರಾಷ್ಟ



ನು ಕುಂತಿ ಗಾಂಧಾರಿಯರೊಂದಿಗೆ ನದಿಯಿಂದ ಆಶ್ರಮಕ್ಕೆ ಬರುತ್ತಿದ್ದನು. ಜೊತೆಗೆ ಸಂಜಯನೂ ಇದ್ದ. ಅವರು ತಪಸ್ಸಿನಿಂದ ತುಂಬ ದುರ್ಬಲರಾಗಿದ್ದರು. ಅವರಿರುವಲ್ಲಿ ಕಾಳ್ಗಿಚ್ಚೊಂದು ವೇಗವಾಗಿ ಸುಡುತ್ತ ಬರುತ್ತಿತ್ತು. ಸಂಜಯನನ್ನು ಒತ್ತಾಯ ಮಾಡಿ ಕಳುಹಿಸಿಬಿಟ್ಟು ತಾವು ಮೂವರೂ ಆ ಬೆಂಕಿಗೆ ಆಹುತಿಯಾದರು. ಸಂಜಯನು ಶೇಷಾಯುಷ್ಯವನ್ನು ಕಳೆಯಲು ಹಿಮಾಲಯಕ್ಕೆ ಹೊರಟು ಹೋದ. ಈ ದುಃಖದ ವಾರ್ತೆಯನ್ನು ನಿನಗೆ ಹೇಳುವ ದೌರ್ಭಾಗ್ಯ ನನ್ನ ಪಾಲಿಗೆ ಬಂದಿತು” ಎಂದನು. ಈ ಮಾತನ್ನು ಕೇಳುತ್ತಿದ್ದಂತೆಯೇ ಯುಧಿಷ್ಠಿರನು ಮೂರ್ಛೆ ಹೋದನು; ಸಹದೇವನು ಸಣ್ಣ ಮಗುವಿನಂತೆ ಅಳತೊಡಗಿದನು. ಭೀಮನ ದುಃಖಕ್ಕೆ ಪಾರವೇ ಇರಲಿಲ್ಲ, ತಾಯಿ ಸತ್ತು ಹೋಗಿರುವಳೆಂಬುದನ್ನು, ಕುಂತಿಯ ಮಕ್ಕಳಾದ ತಾವು ತಬ್ಬಲಿಗಳಾದೆವೆಂದು ಕಲ್ಲಿಸಿಕೊಳ್ಳಲೂ ಅವರಿಗೆ ಸಾಧ್ಯವಾಗಲಿಲ್ಲ. ಆದರೂ ಅದು ನಿಜವಾಗಿತ್ತು. ತಮಗಾಗಿ ತಮ್ಮ ಜೊತೆಗೆ ಉದ್ದಕ್ಕೂ ಕಷ್ಟಗಳಲ್ಲಿ ಪಾಲ್ಗೊಂಡ, ತಮ್ಮನ್ನು ಜೀವನದುದ್ದಕ್ಕೂ ರಕ್ಷಿಸಿದ ಪ್ರೀತಿಯ ತಾಯಿ ಇನ್ನಿಲ್ಲ. ನಾರದನೇ ಅವರಿಗೆ ಸಮಾಧಾನ ಮಾಡಬೇಕಾಯಿತು. ಆ ಹೊತ್ತಿಗೆ ವ್ಯಾಸನೂ ಅಲ್ಲಿಗೆ ಬಂದು ದುಃಖವನ್ನು ಎದುರಿಸಲು ಸಹಾಯಮಾಡಿದ. ಆದರೂ ಆ ದುಃಖಅ ಶಮನವಾಗಲು ತಿಂಗಳುಗಳೇ ಬೇಕಾದವು; ಮರೆಯಲು ವರ್ಷಗಳೇ ಬೇಕಾದವು.ಕಾಲವು ಏನನ್ನಾದರೂ ಮರೆಯಿಸಬಲ್ಲುದು. ಪಾಂಡವರು ಪುನಃ ರಾಜ್ಯಾಡಳಿತದಲ್ಲಿ ಮನಸ್ಸು ಕೊಟ್ಟರು; ಅಭಿಮನ್ಯುವಿನ ಮಗು ಪರೀಕ್ಷಿತ್ತು ಅವರ ಪಾಲಿಗೆ ಸಂಜೀವಿನಿಯಾದ.

ಪರಿವಿಡಿ